ಕಲಾವಿದ ಎನ್.ಸಿ. ದೇಸಾಯಿ ಅವರನ್ನು ಕುರಿತ ಆರ್ಕೈವ್ ಗೆ ನಿಮಗೆ ಸ್ವಾಗತ.
೭೯ ವರ್ಷಗಳ ತಮ್ಮ ಜೀವನವನ್ನು ಕಲಾ ಆರಾಧನೆಗೆ ಮುಡುಪಾಗಿಟ್ಟು, ಧೀಮಂತ ಕಲಾವಿದ ಎಂದು ಖ್ಯಾತಿಯನ್ನು ಪಡೆದ ಎನ್.ಸಿ. ದೇಸಾಯಿಯವರು ತಮ್ಮ ಜೀವನದ ಕಾಲಾವಧಿಯಲ್ಲಿ ಅಡ್ಡಿ ಆತಂಕಗಳನ್ನು ಮೆಟ್ಟಿ ನಿಂತು ಕಲಾ ಸಾಧನೆ ಮಾಡಿರುವವರು. ಇವರ ಕಲಾಕೃತಿಗಳು ಮತ್ತು ಕಲಾ ಸಂಶೋಧನ ಸಾಹಿತ್ಯ(ಲೇಖನಗಳು) ಜನಮನವನ್ನು ಸೂರೆಗೊಂಡಿವೆ. ಈ ದ್ವಿಮುಖ ಪ್ರತಿಭಾವಂತ ಅಗಡಿಯ ಹಾವನೂರು ಸಂಸ್ಥಾನದ ಮನೆತನದವರು ಇವರ ಬದುಕಿನ ಹಿಂದೆ ಒಂದು ಮಹತ್ವದ ಇತಿಹಾಸವೇ ಇದೆ.
- ಮುತ್ತಮ್ಮ ನಾರಾಯಣ ಯನಮನೋಲ್ಲು ಮಹಾ ಪ್ರಬಂಧದಿಂದ
